ಗುರುಗಾಂವ್ ಕನ್ನಡ ಸಂಘದ ವತಿಯಿಂದ ಆಮಂತ್ರಣ ಪತ್ರಿಕೆ
ನಮಸ್ಕಾರಗಳು
ಪ್ರೀತಿಯ ಕನ್ನಡಿಗರೆ....., ಗುರುಗಾಂವ್ ಕನ್ನಡ ಸಂಘವು ದಿನಾಂಕ 17/11/2019 ರಂದು ಸಮಯ ಮಧ್ಯಾಹ್ನ 3:30 ರಿಂದ Northcap University Auditorium Sector-23A Gurgaon ನಲ್ಲಿ ಕರ್ನಾಟಕ ರಾಜ್ಯೋತ್ಸವ ವನ್ನು ಆಚರಿಸಲಾಗುತ್ತಿದೆ
1) ಸ್ಥಳೀಯ ಕಲಾವಿದರಿಂದ ಉತ್ತಮ ಕಾರ್ಯಕ್ರಮಗಳು.
2)ಇದೆ ಮೊದಲ ಬಾರಿಗೆ 1೦ಮತ್ತು12ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಸ್ಮರಣೆಕೆ ನೀಡಲಾಗುವುದು
3)ಚಾಮರಾಜ ಕಲಾಮಂದಿರದ ಖ್ಯಾತ ಚಲನಚಿತ್ರ ಕಲಾವಿದ ಚಲುವರಾಜ್ ಎಂ ತಂಡದಿಂದ ನ್ಯೂತ್ಯಕಾರ್ಯಕ್ರಮಗಳು
ಗುರುಗಾಂವ್ ಕನ್ನಡ ಸಂಘವು ತನ್ನ ಅಕ್ಕ ಪಕ್ಕದ ಪ್ರತಿಯೊಬ್ಬ ಕನ್ನಡಿಗರನ್ನು ಒಂದೇ ಗುಡಿನಲ್ಲಿ ಒಗ್ಗುಡಿಸುವ ಕೆಲಸವನ್ನು ಸುಮಾರು ವರ್ಷಗಳಿಂದ ಮಾಡುತ್ತಾ ಬರುತ್ತಿದೆ, ಇದು ಪ್ರತಿಯೊಬ್ಬ ಕನ್ನಡಿಗರ ಕಾರ್ಯಕ್ರಮ ಸಂಘದಲ್ಲಿ ಕಾರ್ಯಕ್ರಮ ಇದೆ ಎಂದು ತಿಳಿದರೆ ಸಾಕು, ಅದು ನಮ್ಮದೇ ಕಾರ್ಯಕ್ರಮ ಎಂದು ತಿಳಿದು, ಕಾರ್ಯಕ್ರಮಕ್ಕೆ ಕುಟುಂಬ ಸಮೇತರಾಗಿ ಮತ್ತು ಮಿತ್ರರೊಡನೆ ಹಾಗೂ ನಿಮಗೆ ತಿಳಿದಿರುವ ಕನ್ನಡಿಗರನ್ನು ಜೊತೆಯಲ್ಲಿ ಕರೆತಂದು ಕಾರ್ಯಕ್ರಮಗಳನ್ನು ಯಶೆಸ್ವಿಗೊಳಿಸಬೇಕೆಂದು ಸಂಘದ ಪರವಾಗಿ ಮತ್ತು ಎಲ್ಲ ಕನ್ನಡಾಂಬೆಯ ಮಕ್ಕಳ ಪರವಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.
ನಿಮ್ಮೆಲ್ಲರ ಆಗಮನದ ನಿರೀಕ್ಷೆಯಲ್ಲಿ ನಾವುಗಳು.....🙏
ಅಧ್ಯಕ್ಷರು
ಸಾಯಿಪ್ರಸಾದ್ಎಚ್*
ಪ್ರಧಾನ ಕಾರ್ಯದರ್ಶಿ
ಕೃಷ್ಣಪ್ಪ .ಎಂ
ಖಜಾಂಚಿ
ಮರಿಬಸಪ್ಪ ಎಂ
ಹಾಗೂ ಎಲ್ಲಾ ಕಾರ್ಯಕಾರಿಣಿ ಸದಸ್ಯರುಗಳು