------------------------------------------------------
ಬಂಧುಗಳೇ
ನೆನ್ನೆ ತಾನೆ ಬೇವು ಬೆಲ್ಲ ತಿಂದು ಹೋಳಿಗೆ ಊಟ ಮಾಡಿದ್ದೀರಿ ಅಂದು ಕೊಳ್ಳುತ್ತೇವೆ ಇದರ ಜೊತೆ ಜೊತೆಯಲಿ ಬರುವ ಭಾನುವಾರ 14.04.2024ರ ಸಂಜೆ 4:00ಗೆ ಶಾರ್ಪ್ಆಗಿ ಗುರುಗಾಂವ್ ಕನ್ನಡ ಸಂಘದ ವತಿಯಿಂದ ಯುಗಾದಿ ಸಾಂಸ್ಕೃತಿಕ ಸಂಭ್ರಮವನ್ನು ಆಚರಿಸಲಾಗುತ್ತಿದೆ*ಅಂದು ಎಲ್ಲಾ ಕನ್ನಡ ಮನಸುಗಳು ಒಗ್ಗೂಡೋಣ
ಸ್ಥಳೀಯ ಕಲಾವಿದರಿಂದ ವಿವಿಧ ರೀತಿಯ ನೃತ್ಯ ಮತ್ತು ಗಾಯನ ಹಾಗೂ
ಇದೇ ಮೊದಲ ಬಾರಿಗೆ
ಅತಿಥಿ ಕಲಾವಿದರಗಳಲ್ಲಿ ಒಬ್ಬರಾದ ಮಹಾನ್ ಗಾಯಕ ಕಳೆದ ತಿಂಗಳು ತಮ್ಮ ಗಾಯಕದ ಮೂಲದ ZEE KANNADA TV ಯಲ್ಲಿ ಸರಿಗಮಪ SEASON 20 VINNER ಆಗಿ ನಾಡು,ದೇಶ ಮತ್ತ ಹೊರದೇಶದಲ್ಲಿ ಜನತೆಯ ಮನೆಗೆದ್ದಿರುವ ಮಾಸ್ಟರ್ ದರ್ಶನ್ ನಾರಾಯಣ್ ನಮ್ಮೆಲ್ಲರನ್ನು ರಂಜಿಸಲು ಬರುತ್ತಿದ್ದಾರೆ.
ಮತ್ತೋಂದು ತಂಡ
ಡಾ. ಮಾಲಿನಿ ರವಿಶಂಕರ್ ನೃತ್ಯ ಕ್ಷೇತ್ರದ ಮಹಾನ್ ಸಾಧನೆ ಮಾಡಿದ ಇವರು ನೃತ್ಯದಲ್ಲಿ ಪದವಿ ಪಡೆದು, ನೃತ್ಯದಲ್ಲೇ ವಿದ್ವತ್ ಮುಗಿಸಿ, ದಾಸ ಸಾಹಿತ್ಯದ ಮೇಲೆ ಪಿ ಎಚ್ ಡಿ ಮಾಡಿ ಡಾಕ್ಟರೇಟ್ ಪಡೆದವರು. ಕನ್ನಡ ಸಾಹಿತ್ಯದಲ್ಲಿ ಚಿನ್ನದ ಪದಕವನ್ನು ಪಡೆದ ಸರಸ್ವತಿ ಇವರು.
ಅಮೆರಿಕ ಚೈನಾ ಜಪಾನ್ ಶ್ರೀಲಂಕಾ ಪಿಲಿಫೈನ್ಸ್ ಬುತಾನ್ ಮಲೇಶಿಯಾ ಇಂತಹ ಹತ್ತಾರು ದೇಶಗಳಲ್ಲಿ ದೇಶದ ಹೆಗ್ಗಳಿಕೆಯನ್ನು ಸಾರುವಂತಹ ನೃತ್ಯ ಕಾರ್ಯಕ್ರಮ ನೀಡಿದ ಇವರು
ಬೆಂಗಳೂರು ಮಹಾನಗರ ಪಾಲಿಕೆ ನೀಡುವ ಕೆಂಪೇಗೌಡ ಪ್ರಶಸ್ತಿಯನ್ನು ಪಡೆದವರು ಇದಲ್ಲದೆ ಹತ್ತಾರು ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ,ಮಹತ್ವದ ನೃತ್ಯ ರೂಪಕಗಳನ್ನು ನಾಡಿನ ಹಾಗೂ ದೇಶದ ಮತ್ತು ವಿದೇಶದ ರಂಗಮಂದಿರಗಳಲ್ಲಿ ಪ್ರದರ್ಶನ ಮಾಡಿದ ಹೆಗ್ಗಳಿಕೆಗೆ ಇವರದ್ದು. ಇಂತಹ ಮಹತ್ತರ ಸಾಧನೆಯನ್ನು ಮಾಡಿರುವ ಡಾ.ಮಾಲಿನಿ ರವಿಶಂಕರ್ ರವರ ಸಂಖ್ಯಾ ಸಮಾಗಮ ಮತ್ತು ನೃತ್ಯರೂಪಕ ಹಾಗೂ ಹಲವು ರೀತಿಯ ಪ್ರದರ್ಶನಗಳನ್ನು ನೀಡಲಿದ್ದಾರೆ
ತಾವುಗಳೆಲ್ಲರೂ ಕುಟುಂಬ ಸಮೇತ ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ ಕಾರ್ಯಕ್ರಮದ ನಂತರ ವಿಷೇಶವಾಗಿ ಹೋಳಿಗೆಯ ಊಟದ ವ್ಯವಸ್ಥೆ ಮಾಡಲಾಗಿದೆ
ನಿಮ್ಮೆಲ್ಲರ ಆಗಮನದ ನಿರೀಕ್ಷೆಯಲ್ಲಿ ನಾವುಗಳು
ಕೃಷ್ಣಪ್ಪ ಎಂ
ಅಧ್ಯಕ್ಷರು ಗುರುಗಾಂವ್ ಕನ್ನಡ ಸಂಘ
ಗುರುಗಾಂವ್
-------------------------------------------------------------------------------------------
🙏ಶುಭೋದಯ
ನಾಳೆ ನಡೆಯಲಿರುವ ಆಟೋಟ ಸ್ಪರ್ಧೆಗಳಲ್ಲಿ ತಮ್ಮ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ, ಪುಟಾಣಿ ಮಕ್ಕಳಿಂದ ಹಿರಿಯವರಿಗೂ ಸ್ಪರ್ಧೆ ಗಳು ಇಡಲಾಗಿದೆ, ಮತ್ತು
General medical check up camp from Dr, Sringeri, Polaris hospital, Sohna road, Gurgaon ಇವರಿಂದ,ಬೆಳಗ್ಗೆ ಉಪಹಾರ 10:30 ವರಗೆ ಮಾತ್ರ. ತಾವೆಲ್ಲರೂ ಕುಟುಂಬ ಸಮೇತ ಹಾಗೂ ಸ್ನೇಹಿತರ ಜೊತೆಗೂಡಿ ಬಂದು ಸ್ಪರ್ಧೆಗಳಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.
VENUE:
GAV international school Sector 7 extension (Vivekananda School) Gurgaon
ಧನ್ಯವಾದಗಳು 🙏
----------------------------------------------------------------------------
🙏ಶುಭೋದಯ
ಗುರುಗಾಂವ್ ಕನ್ನಡ ಸಂಘವು ಆಟೋಟ ಸ್ಪರ್ಧೆಗಳನ್ನು GAV ಸ್ಕೊಲ್ ಸೆಕ್ಟರ್ 7 ಗುರುಗಾಂವ್ ನಲ್ಲಿ ( ವಿವೇಕಾನಂದ ಸ್ಕೂಲ್) 04/02/2024ರ ಭಾನುವಾರ ಬೆಳಗ್ಗೆ 10:00 ಗಂಟೆಯಿಂದ ನಡೆಸಲಾಗುತ್ತಿದೆ ಎಲ್ಲರೂ ಬಂದು ಭಾಗಿಯಾಗಬೇಕು ಎಂದು ವಿನಂತಿ ಹಾಗೂ ಹೆಚ್ಚಿನ ಮಾಹಿತಿಯನ್ನು ತಿಳಿಸಲಾಗುವುದು
ಧನ್ಯವಾದಗಳು.
-----------------------------------------------------------------
ಗುರುಗಾಂವ್ ಕನ್ನಡ ಸಂಘ(ರಿ)
GURGAON KANNADA SANGHA(®)
ಪ್ರೀತಿಯ ಎಲ್ಲ ಕನ್ನಡಿಗರಿಗೂ ನಮಸ್ಕಾರಗಳು...
ತಮಗೆಲ್ಲ ತಿಳಿದಿರುವಂತ್ತೆ ಪ್ರತಿ ವರ್ಷದಂತ್ತೆ ಗುರುಗಾಂವ್ ಕನ್ನಡ ಸಂಘವು ಈ ವರ್ಷವೂ ಸಹ ಭಕ್ತಾದಿಗಳ ಸಹಾಯ ಮತ್ತು ಸಹಕಾರದೊಂದಿಗೆ ಶ್ರೀ ಗಣೇಶೋತ್ಸವವನ್ನು 02.09.2019 ರಿಂದ 08.09.2019 ರ ವರಗೆ (7 ದಿನಗಳು)ತುಂಬಾ ವಿಜೃಂಭಣೆಯಿಂದ ಆಚರಿಸಲಾಯಿತು.
ಸುಮಾರು 19-20 ವರ್ಷಗಳ ಹಿಂದೆ ಗುರುಗ್ರಾಮದಲ್ಲೆಯೇ 2 ನೇ ಗಣೇಶೋತ್ಸವ ಆಚರಣೆಯನ್ನು ನಮ್ಮ ಕನ್ನಡ ಸ್ನೇಹಿತರು ಒಂದು ಬಾಡಿಗೆಯ ಮನೆಯೊಂದರಲ್ಲಿಯೇ ಪೂಜಿಸಿ ಆಚರಿಸಲು ಶುರು ಮಾಡಿದರು. ಅದರ ಮರು ವರ್ಷ ಇಲ್ಲಿನ ರಾಜನಗರದ ಸ್ಥಳೀಯರು ಸಹ ಕೈ ಜೋಡಿಸಿ ಒಂದು ರಸ್ತೆಯಲ್ಲಿ (ಗಲ್ಲಿಯಲ್ಲಿ)ಗಣೇಶನನ್ನು ಕೂರಿಸಲು ಸಹಕರಿಸಿ ಅವರು ಸಹ ಕನ್ನಡಿಗರೊಂದಿಗೆ ಸೇರಿ ಈ ಹಬ್ಬದ ಆನಂದ ಪಡೆಯುತ್ತಿದ್ದರು, ಹೀಗೆ 4-5 ವರ್ಷಗಳು ಗುರುಗ್ರಾಮದ ರಾಜನಗರದಲ್ಲಿ ಕೂರಿಸುತ್ತಿದ್ದ ಗಣೇಶನನ್ನು ನಂತರ ಸೆಕ್ಟರ್4 ಆರ್ಯ ಸಮಾಜ ಮಂದಿರಕ್ಕೆ ಸ್ಥಳಾಂತರ ಮಾಡಲಾಯಿತು ಕಾರಣ ಹೀರೊ ಮತ್ತು ಹೊಂಡಾ ಸ್ನೇಹಿತರ ಜೊತೆಗೆ ಸುಮಾರು 1956 ರಿಂದ ಗುರುಗ್ರಾಮದಲ್ಲಿ ವಾಸವಾಗಿದ್ದ ಕನ್ನಡದ ಕುಟುಂಬದವರು ಹಾಗೂ 1984 ರಿಂದ ಮಾರುತಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ಸೀನಿಯರ್ಸ್ ಹಾಗೂ ಅನೇಕರು ನಮಗಿಂತ್ತ 5,10, 15 ವರ್ಷಗಳ ಹಿಂದೆಯೇ ಗುರುಗ್ರಾಮ ಕ್ಕೆ ಬಂದು ನೆಲೆಸಿದ್ದ ಕನ್ನಡಿಗರ ಪರಿಚಯವಾಯಿತು ಹೀಗೆ ಕನ್ನಡಿಗರ ಜನಸಂಖ್ಯೆ 100 ರಿಂದ 150 ಕ್ಕೆ ಹೆಚ್ಚಿದ ಕಾರಣ ಸೆಕ್ಟರ್ 4 ಗೆ ಸ್ಥಳಾಂತರ ಮಾಡಲಾಯಿತು.. ನಂತರದ ವರ್ಷಗಳಲ್ಲಿ ಶ್ರೀ ಗಣೇಶೋತ್ಸವದ ಹಬ್ಬಕ್ಕೆ ಇನ್ನು ಅನುಕೂಲಕರ ಜಾಗವಾದ ಈಗಿನ ರಾಧಾಕೃಷ್ಣ ಮಂದಿರ ನ್ಯೂ ಕಾಲೊನಿಯಲ್ಲಿ ಅಚ್ಚರಿಸುತ್ತಾ ಬರುತ್ತಿರುವುದು ತಮಗೆಲ್ಲ ತಿಳಿದಿರುವ ವಿಷಯ...
ಈ ಮಟ್ಟಕ್ಕೆ ಗುರುಗಾಂವ್ ಕನ್ನಡ ಸಂಘವು ಅಚರಿಸುತ್ತಾ ಬರುತ್ತಿರುವ ಶ್ರೀ ಗಣೇಶೋತ್ಸವ ಹಬ್ಬವು ಈ ಮಟ್ಟಿಗೆ ಬೆಳೆಯಲು ಕಾರಣ ಸುಮಾರು 20 ವರ್ಷಗಳಿಂದ ಹಲವಾರು ಕನ್ನಡಿಗರು ಶ್ರಮಸಿದ ಫಲವಿದು..
ಅನೇಕ ಕನ್ನಡ ಸ್ನೇಹಿತರು ಮತ್ತು ಹಿರಿಯರು ತಮ್ಮ ತಾಯಿನಾಡಿಗೆ ಹಿಂದಿರುಗಿದ್ದಾರೆ, ಕೆಲವು ಕನ್ನಡ ಸ್ನೇಹಿತರು ನಮ್ಮ ಪಕ್ಕದ ಭಿವಾಡಿ ಯಲ್ಲಿ ಇದ್ದಾರೆ ಹಾಗೂ ಕೆಲವರು ನಮ್ಮನ್ನು ಅಗಲಿದ್ದಾರೆ..
ಕೆಲವು ಕನ್ನಡಿಗರು ಅಂದಿನಿಂದ ಇಂದಿನ ವರೆಗೂ ಶ್ರಮಿಸಿಸುತ್ತಿದ್ದಾರೆ....
ಕೆಲವರು ಪ್ರತ್ಯಕ್ಷವಾಗಿ ಸಂಘದ ಏಳಿಗೆಗೆ ಶ್ರಮಿಸುತ್ತಿದ್ದಾರೆ ಇನ್ನು ಕೆಲವರು ಪರೋಕ್ಷವಾಗಿ ಎಲೆಮರೆ ಕಾಯಿಯಂತ್ತೆ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಹೀಗೆ ನಿಸ್ವಾರ್ಥ ಮನೋಭಾನೆಯಿಂದ ಸಂಘಕ್ಕೆ ಶ್ರಮಿಸಿ ಸಂಘದ ಏಳಿಗೆಗೆ ಕಾರಣರಾದ ಪ್ರತಿಯೊಬ ನಿಸ್ವಾರ್ಥ ಕನ್ನಡಿಗರನ್ನು ನಾವು ಮರೆಯುವಂತಿಲ್ಲ..
ಈ ನಮ್ಮ ಗುರುಗಾಂವ್ ಕನ್ನಡ ಸಂಘದ ಯಾವುದೇ ಕಾರ್ಯಕ್ರಮವಾದರು ಸಹ ನಾವೆಲ್ಲರೂ ಕನ್ನಡಿಗರು ಎಂಬ ಮನೋಭಾವದಿಂದ ಪ್ರತಿಯೊಬ್ಬರು ಸಹ ತಮಗೆ ಸಾಧ್ಯವಾದ ಸಹಾಯ ಮತ್ತು ಸಹಕಾರವನ್ನು ನೀಡುತ್ತಾ ಬರುತ್ತಿದ್ದಾರೆ..
ಇದಕ್ಕೆಲ್ಲ ಮುಖ್ಯ ಕಾರಣ ನಮ್ಮ ಹಿರಿಯ ಕನ್ನಡಿಗರು ಹಾಕಿ ಕೊಟ್ಟ ತಳಪಾಯ, ಆ ದಿನಗಳಲ್ಲಿ ಹೀರೊ ಮತ್ತು ಹೊಂಡ ಕಂಪನಿಯಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡಿಗರು ಇದ್ದರು ಇವರೆಲ್ಲ ಸುಮಾರು 21 ವರ್ಷದ ಹಿಂದೆ 21,22,23 ವರ್ಷದ ತರುಣರು, ಈ ತರುಣರ ಬೆನ್ನೆಲುಬಾಗಿ ನಮ್ಮ ಹಿರಿಯ ಕನ್ನಡಿಗರು ನಿಂತ್ತು ನಡೆಸಿಕೊಂಡು ಬಂದ ದಾರಿ ತುಂಬಾ ಆತ್ಮೀಯತೆಯಿಂದ ಕೂಡಿತ್ತು ಅದೇ ದಾರಿಯಲ್ಲಿ ಅವರ ಮಾರ್ಗದರ್ಶನದೊಂದಿಗೆ ಈ ನಮ್ಮ ಗುರುಗಾಂವ್ ಕನ್ನಡ ಸಂಘದ ಎಲ್ಲ ಕಾರ್ಯಕ್ರಮಗಳು ಅದ್ದೂರಿಯಾಗಿ ಯಶಸ್ವಿಯಾಗುತ್ತಿವೆ.
ಮತ್ತೊಮ್ಮೆ ಈ ನಮ್ಮ ಗುರುಗಾಂವ್ ಕನ್ನಡ ಸಂಘದ ಶ್ರೀ ಗಣೇಶೋತ್ಸವು ಈ ಮಟ್ಟಿಗೆ ಯಶಸ್ವಿಯಾಗಿ ಆಚರಿಸಲು ಕಾರಣರಾಗಿರುವ ಈಗ ಗುರುಗ್ರಾಮದಲ್ಲಿ ಇರುವ ಅಥವ ಮರಳಿ ಕರುನಾಡಿಗೆ ಹಿಂದಿರುಗುವ ಎಲ್ಲ ಹಿರಿಯರಿಗೂ, ಸ್ನೇಹಿತರಿಗೂ ಗುರುಗ್ರಾಮದ ಸಮಸ್ತ ಕನ್ನಡಿಗರ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ...
ಹಾಗೂ ಶ್ರೀ ಗಣೇಶೋತ್ಸವನ್ನು ತುಂಬಾ ಅಚ್ಚುಕಟ್ಟಾಗಿ ನಡೆಸಿಕೊಟ್ಟ ಈಗಿನ ಗುರುಗಾಂವ್ ಕನ್ನಡ ಸಂಘದ ಅಧ್ಯಕ್ಷರಾದ
ಶ್ರೀ ಸಾಯಿಪ್ರಸಾದ್
ಮತ್ತು ಪ್ರಧಾನ ಕಾರ್ಯದರ್ಶಿಗಳಾದ
ಶ್ರೀ ಕೃಷ್ಣಪ್ಪ ಹಾಗೂ ಸಂಘದ ಎಲ್ಲ ಪದಾಧಿಕಾರಿಗಳಿಗೆ ಧನ್ಯವಾದಗಳು..
ಜೈ ಕರ್ನಾಟಕ ಮಾತೆ..
ತಿಮ್ಮಪ್ಪ ಜಿ ಆರ್..
SHRI SATYANARAYAN PUJE HELD AT GURGAON ON 28.7.2019
Gurgaon Kannada Sangha Celebrated
Ugadi cultural meet 28/04 /2019.
28/4/2019ರಂದು ಗುರುಗಾಂವ್ ಕನ್ನಡ ಸಂಘವು ದೆಹಲಿ ಕರ್ನಾಟಕ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಯುಗಾದಿ ಸಾಂಸ್ಕೃತಿಕ ಮಿಲನ ಕಾರ್ಯಕ್ರಮವು ತುಂಬಾ ಅಚ್ಚುಕಟ್ಟಾಗಿ NCU ಸಂಭಾಗಣ ಸೆಕ್ಟರ್23A ಗುರುಗಾಂವ್ ನಲ್ಲಿ ನೆರೆವೇರಿತು.