Saturday, 16 November 2024



 

Karnataka Rajyotsava at Gurgaon on 17th November 2024

 

ಎಲ್ಲರಿಗೂ ನಮಸ್ಕಾರ


ಇದೆ ಭಾನುವಾರ ಅಂದರೆ 17.11.2024 ರಂದು  Excelsior American school Sector 43 Gurgaon ನಲ್ಲಿ ಗುರುಗಾಂವ್ ಕನ್ನಡ ಸಂಘದ ವತಿಯಿಂದ  ಕರ್ನಾಟಕ ರಾಜ್ಯೋತ್ಸವ ಸಂಭ್ರಮವನ್ನು ಮಧ್ಯಾಹ್ನ 3:30 ರಿಂದ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಅಂದು ಎಲ್ಲಾ ಕನ್ನಡ ಮನಸುಗಳು  ಒಗ್ಗೂಡೋಣ


ಅಂದು ಸ್ಥಳೀಯ ಕಲಾವಿದರಿಂದ ವಿವಿಧ 

ರೀತಿಯ ನೃತ್ಯ ಮತ್ತು ಗಾಯನ

 ಹಾಗೂ


ಇದೇ ಮೊದಲ ಬಾರಿಗೆ

 ZEE KANNADA TV ಯಲ್ಲಿ SEASON 5 ರ WINNER  ಆಗಿ ನಾಡಿನ ಜನತೆಯ ಮನಗೆದ್ದಿರುವ  ಡ್ರಾಮಾ ಜೂನಿಯರ್ಸ್ ನ ಕುಣಿಗಲ್ ವಿಷ್ಣು ಮತ್ತು ಲಿಖಿತ್  ಶ್ರೀ ಸಾಯಿ ಸಂಗಡಿಗರಿಂದ ಅದ್ಭುತವಾದ ಹಾಸ್ಯ ಕಾರ್ಯಕ್ರಮ.

          ಹಾಗೂ 

19 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು  ಸಿನಿಮಾ ಕ್ಷೇತ್ರದಲ್ಲಿ ಹಿನ್ನಲೆ ಗಾಯಕರಾಗಿ, ನಾಡು ಹೋರನಾಡು ಹಾಗೂ ಅಮೆರಿಕ, ನ್ಯೂಯಾರ್ಕ್, ದುಬೈ  , ಥೈಲ್ಯಾಂಡ್,  ನ್ಯೂಜರ್ಸಿ ಕಾಟ್ಮಂಡು,ಶ್ರೀಲಂಕಾ  ಇಂತಹ ಹತ್ತಾರು ದೇಶಗಳಲ್ಲಿ ಜಾನಪದ ಗಾಯಕದ ಮೂಲಕ ದೇಶದ ಹೆಗ್ಗಳಿಕೆಯನ್ನು ಸಾರಿರುವ

ನಾಡಿನ ಜಾನಪದ ಜಂಗಮ ಅಂತರಾಷ್ಟ್ರೀಯ ಜಾನಪದ ಕಲಾವಿದ ಜೋಗಿಲಾ ಸಿದ್ದರಾಜು ಮತ್ತು ತಂಡದವರಿಂದ ಜನಪದ ಝೇಂಕಾರ ಇವರು ನಮ್ಮೆಲ್ಲರನ್ನು ರಂಜಿಸಲು ಬರುತ್ತಿದ್ದಾರೆ


ತಾವುಗಳೆಲ್ಲರ ತಪ್ಪದೇ ಬನ್ನಿ ಎಲ್ಲರೂ ಸೇರಿ ನಾಡಹಬ್ಬ ವನ್ನು ಅದ್ದೂರಿಯಾಗಿ ಆಚರಿಸೋಣ ಹಾಗೂ ಕನ್ನಡಮ್ಮನ ತೇರನ್ನು ಎಳೆಯೋಣ 


ಗುರುಗಾಂವ್ ಕನ್ನಡ ಸಂಘ


Saturday, 9 November 2024

ಗುರುಗಾಂವ್ ಕನ್ನಡ ಸಂಘವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ on 17th November 2024 Sunday

 

ಆತ್ಮೀಯ ಕನ್ನಡ ಬಂಧುಗಳೇ


ದಿನಾಂಕ 17/11/2024ರ ಭಾನುವಾರ ಗುರುಗಾಂವ್ ಕನ್ನಡ ಸಂಘವು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿದೆ.

ಅಂದಿನ ಕಾರ್ಯಕ್ರಮದಲ್ಲಿ 2023 ಮತ್ತು 2024ನೇ ಸಾಲಿನ 10ನೇ ತರಗತಿ ಹಾಗೂ 12ನೇ ತರಗತಿಯಲ್ಲಿ  ಶೇಕಡಾ 90% ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಗುರುಗಾಂವ್ ಕನ್ನಡ  ಸಂಘದ  ಸದಸ್ಯರ ಮಕ್ಕಳಿಗೆ  ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ(ಅಜೀವ ಸದಸ್ಯರ ಮಕ್ಕಳಿಗೆ ಮಾತ್ರ) ಅಂತಹ ಮಕ್ಕಳ ಪೋಷಕರು ದಿನಾಂಕ 10/11/2024 ರ  ಮೊದಲು ತಮ್ಮ ಮಕ್ಕಳ ಹೆಸರುಗಳನ್ನು ಇವರ ಬಳಿ ನೊಂದಾಹಿಸಿಕೊಳ್ಳಿ

ರಾಜಶೇಖರ್ ಪಾಟೀಲ್

8010546601

ಚಂದ್ರಶೇಖರ.ಕೆ (ಮಂಗಳೂರು) 

9891281926 


ಈ ಮೊದಲೇ ತಿಳಿಸಿದ ಹಾಗೆ  ದಯವಿಟ್ಟು ಆ ದಿನ ತಾವುಗಳು ತಪ್ಪದೇ ಕುಟುಂಬ ಸಮೇತರಾಗಿ ಹಾಗೂ ಮಿತ್ರರೊಂದಿಗೆ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ


ಅಧ್ಯಕ್ಷರು

ಪಧಾದಿಕಾರಿಗಳು

ಹಾಗೂ ಕಾರ್ಯಕಾರಿಣಿ ಸದಸ್ಯರುಗಳು


-----------------------------------------------------------------------------------------------------------------------------


ಕನ್ನಡ ಮಾತನಾಡೋಣ

ಕನ್ನಡ ಕಲಿಸೋಣ, 

ಕನ್ನಡ ಬೆಳೆಸೋಣ, 

ಕನ್ನಡದ ಅಭಿವೃದ್ಧಿಗೆ ಶ್ರಮಿಸೋಣ

ಕನ್ನಡದ ನೆಲದ ಅಭಿವೃದ್ಧಿಗೆ ಶ್ರಮಿಸಿದವರನ್ನು ನೆನೆಯೋಣ 


ಬದುಕು ಕಲಿಸಿದ ಈ ಮಾತೃಭೂಮಿಯ ಹಬ್ಬದಂದು ಕನ್ನಡ ಪ್ರೀತಿ ಮೆರೆವ ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.💐🙏

-----------------------------------------------------------------------------------------------------------------------

Thursday, 14 November 2019

INVITATION - KARNATAKA RAJYOTSAVA ON 17-NOV-19 AT GURGAON


ಗುರುಗಾಂವ್ ಕನ್ನಡ ಸಂಘದ ವತಿಯಿಂದ ಆಮಂತ್ರಣ ಪತ್ರಿಕೆ

ನಮಸ್ಕಾರಗಳು

ಪ್ರೀತಿಯ ಕನ್ನಡಿಗರೆ....., ಗುರುಗಾಂವ್ ಕನ್ನಡ ಸಂಘವು ದಿನಾಂಕ 17/11/2019 ರಂದು ಸಮಯ  ಮಧ್ಯಾಹ್ನ 3:30 ರಿಂದ Northcap University Auditorium Sector-23A Gurgaon ನಲ್ಲಿ ಕರ್ನಾಟಕ ರಾಜ್ಯೋತ್ಸವ ವನ್ನು ಆಚರಿಸಲಾಗುತ್ತಿದೆ

1) ಸ್ಥಳೀಯ ಕಲಾವಿದರಿಂದ ಉತ್ತಮ ಕಾರ್ಯಕ್ರಮಗಳು.
2)ಇದೆ ಮೊದಲ ಬಾರಿಗೆ 1೦ಮತ್ತು12ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ  ಮತ್ತು ಸ್ಮರಣೆಕೆ ನೀಡಲಾಗುವುದು
3)ಚಾಮರಾಜ ಕಲಾಮಂದಿರದ ಖ್ಯಾತ ಚಲನಚಿತ್ರ ಕಲಾವಿದ ಚಲುವರಾಜ್ ಎಂ ತಂಡದಿಂದ ನ್ಯೂತ್ಯಕಾರ್ಯಕ್ರಮಗಳು

ಗುರುಗಾಂವ್ ಕನ್ನಡ ಸಂಘವು  ತನ್ನ ಅಕ್ಕ ಪಕ್ಕದ ಪ್ರತಿಯೊಬ್ಬ ಕನ್ನಡಿಗರನ್ನು ಒಂದೇ ಗುಡಿನಲ್ಲಿ ಒಗ್ಗುಡಿಸುವ ಕೆಲಸವನ್ನು ಸುಮಾರು ವರ್ಷಗಳಿಂದ ಮಾಡುತ್ತಾ ಬರುತ್ತಿದೆ, ಇದು ಪ್ರತಿಯೊಬ್ಬ ಕನ್ನಡಿಗರ ಕಾರ್ಯಕ್ರಮ ಸಂಘದಲ್ಲಿ ಕಾರ್ಯಕ್ರಮ ಇದೆ ಎಂದು ತಿಳಿದರೆ ಸಾಕು, ಅದು ನಮ್ಮದೇ ಕಾರ್ಯಕ್ರಮ ಎಂದು ತಿಳಿದು, ಕಾರ್ಯಕ್ರಮಕ್ಕೆ ಕುಟುಂಬ ಸಮೇತರಾಗಿ ಮತ್ತು ಮಿತ್ರರೊಡನೆ ಹಾಗೂ ನಿಮಗೆ ತಿಳಿದಿರುವ ಕನ್ನಡಿಗರನ್ನು ಜೊತೆಯಲ್ಲಿ ಕರೆತಂದು ಕಾರ್ಯಕ್ರಮಗಳನ್ನು ಯಶೆಸ್ವಿಗೊಳಿಸಬೇಕೆಂದು ಸಂಘದ ಪರವಾಗಿ ಮತ್ತು ಎಲ್ಲ ಕನ್ನಡಾಂಬೆಯ ಮಕ್ಕಳ ಪರವಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.

ನಿಮ್ಮೆಲ್ಲರ ಆಗಮನದ ನಿರೀಕ್ಷೆಯಲ್ಲಿ ನಾವುಗಳು.....🙏

ಅಧ್ಯಕ್ಷರು
ಸಾಯಿಪ್ರಸಾದ್ಎಚ್*
ಪ್ರಧಾನ ಕಾರ್ಯದರ್ಶಿ
ಕೃಷ್ಣಪ್ಪ .ಎಂ
ಖಜಾಂಚಿ
ಮರಿಬಸಪ್ಪ ಎಂ
ಹಾಗೂ ಎಲ್ಲಾ ಕಾರ್ಯಕಾರಿಣಿ ಸದಸ್ಯರುಗಳು